ಭಾರತಕ್ಕೆ ಯುರೋಪಿಯನ್ನರ ಆಗಮನ

ಪೋರ್ಚುಗೀಸರು:-

ಕ್ರಿ.ಶ 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್ ಟಾಂಟಿನೋಪಲ್ ನ್ನು ವಶಪಡಿಸಿಕೊಂಡರು. ಆದ್ದರಿಂದ ಇವರು ವ್ಯಾಪಾರಕ್ಕಾಗಿ ಹೊಸ ಮಾರ್ಗಗಳನ್ನು ಹುಡುಕಬೇಕಾಯಿತು.
ಪೋರ್ಚುಗೀಸರ ನಾವಿಕ ವಾಸ್ಕೋಡಿಗಾಮ ಕ್ರಿ.ಶ 1498 ರಲ್ಲಿ ಭಾರತಕ್ಕೆ ಜಲಮಾರ್ಗವನ್ನು ಪತ್ತೆಹಚ್ಚಿದನು. ಅವನು ಭಾರತದಲ್ಲಿ ಮೊದಲು ಬಂದು ತಲುಪಿದ ಸ್ಥಳ ಕಲ್ಲಿಕೋಟೆಯಾಗಿದೆ.
ಕೇರಳದ ಕಲ್ಲಿಕೋಟೆಯ ದೊರೆ “ಜಾಮೂರಿನ್”ವಾಸ್ಕೋಡಿಗಾಮನನ್ನು ಸ್ವಾಗತಿಸಿ, ವ್ಯಾಪರಕ್ಕೆ ಅನುಮತಿಯನ್ನು ಕೊಟ್ಟನು.
ಪೋರ್ಚುಗೀಸರು ಕ್ರಿ.ಶ 1500 ರಲ್ಲಿ ತಮ್ಮ ಮೊದಲ ವ್ಯಾಪಾರಿ ಕೇಂದ್ರವನ್ನು ಕೊಚ್ಚಿನ್ ನಲ್ಲಿ ಸ್ಥಾಪಿಸಿದರು. ಮುಂದೆ ಇದೆ ಇವರ ರಾಜಧಾನಿಯಾಯಿತು. ನಂತರ ಇದನ್ನು ಗೋವಾಕ್ಕೆ ಸ್ಥಳಾಂತರಿಸಿದರು. ಗೋವಾ ಇವರ ಪ್ರಸಿದ್ಧ ರಾಜಧಾನಿಯಾಗಿತ್ತು.
ಪೋರ್ಚುಗೀಸರ ಮೊದಲ ಗವರ್ನರ್ ಫ್ರಾನ್ಸಿಸ್ಕೋ-ಡಿ-ಅಲ್ಮೇಡಾ ಆಗಿದ್ದಾನೆ.ra
ಪೋರ್ಚುಗೀಸರ ಪ್ರಸಿದ್ಧ ಗವರ್ನರ್ – ಅಲ್ಫಾನ್ಸೋ-ಡಿ-ಅಲ್ಬುಕರ್ಕ್ ಆಗಿದ್ದಾನೆ.
ವರು ಕ್ರಿ.ಶ 1961 ಡಿಸೆಂಬರ್ 19 ರವರೆಗೆ ಇವರು ಭಾರತದ ಗೋವಾದಲ್ಲಿ ನೆಲೆಸಿದ್ದರು.

ಡಚ್ಚರು:-

ಕ್ರಿ.ಶ 1602 ರಲ್ಲಿ ಸ್ಥಾಪನೆಯಾದ ಡಚ್ಚ ಈಸ್ಟ್ ಇಂಡಿಯಾ ಕಂಪೆನಿಯು ಹಾಲೆಂಡ್ ಅಥವಾ ನೆದರ್ ಲ್ಯಾಂಡ್ ದೇಶಕ್ಕೆ ಸೇರಿದ ಕಂಪನಿಯಾಗಿದೆ.
ಕ್ರಿ.ಶ 1605 ರಲ್ಲಿ ಇವರು ಮೊದಲು ಭಾರತದ ಮಚಲಿಪಟ್ಟಣದಲ್ಲಿ ತಮ್ಮ ವ್ಯಾಪಾರಿ ಮಳಿಗೆಯೊಂದನ್ನು ಸ್ಥಾಪಿಸಿದರು. ಈ ಮಚಲಿಪಟ್ಟಣವು ಇವರ ರಾಜಧಾನಿಯೂ ಕೂಡ ಆಗಿತ್ತು.
ಕ್ರಿ.ಶ 1759 ರಲ್ಲಿ ಡಚ್ಚರು ಮತ್ತು ಬ್ರಿಟಿಷರ ನಡುವೆ ನಡೆದ ಯುದ್ಧದಲ್ಲಿ ಡಚ್ಚರು ಸೋತರು. ಸೋತ ಡಚ್ಚರು ಎಲ್ಲವನ್ನು ಬ್ರಿಟಿಷರಿಗೆ ಒಪ್ಪಿಸಬೇಕಾಯಿತು.

ಬ್ರಿಟಿಷರು:-

ಕ್ರಿ.ಶ 1600 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಅಧಿಕಾರಕ್ಕೆ ತಂದರು. ಇದು ಒಂದು ಖಾಸಗಿ ಕಂಪನಿಯಾಗಿತ್ತು.
ಇದು ಕ್ರಿ.ಶ 1608 ರಲ್ಲಿ ಭಾರತಕ್ಕೆ ಬಂದು ಸೂರತ್ ನ್ನು ತಲುಪಿತು. ಇದು “ಕ್ಯಾಪ್ಟನ್ ಹಾಕಿನ್ಸ್” ನ ನಾಯಕತ್ವದಲ್ಲಿ ಬಂದು ತಲುಪಿತು.
ಭಾರತಕ್ಕೆ ಭೇಟಿ ಕೊಟ್ಟ ಮೊದಲ ಬ್ರಿಟಿಷ್ ರಾಯಭಾರಿ ಕ್ಯಾಪ್ಟನ್ ಹಾಕಿನ್ಸ್ ಆಗಿದ್ದಾನೆ.
ನಂತರ “ಸರ್ ಥಾಮಸ್ ರೋ” ಜಹಾಂಗಿರನ ಆಸ್ಥಾನಕ್ಕೆ ವ್ಯಾಪಾರದ ಅನುಮತಿಗಾಗಿ ಭೇಟಿ ಕೊಟ್ಟು ಅವನಿಂದ ಅನುಮತಿಯನ್ನು ಪಡೆದುಕೊಂಡನು.
ಬ್ರಿಟಿಷರ ಮೊದಲ ವ್ಯಾಪಾರಿ ಕೇಂದ್ರವು ಸೂರತ್ ನಲ್ಲಿ ಸ್ಥಾಪಿತವಾಯಿತು. ಮೊದಲ ರಾಜಧಾನಿ-ಮುರ್ಷಿದಾಬಾದ್, ನಂತರ ಕಲ್ಕತ್ತಾ ಮತ್ತು ಕೊನೆಯ ರಾಜಧಾನಿ ದೆಹಲಿಯಾಗಿತ್ತು.

ಫ್ರೆಂಚರು:-

ಕ್ರಿ.ಶ 1664 ರಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಸ್ಥಾಪನೆಯಾಯಿತು.
ಇದು ಒಂದು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿತ್ತು.
ಇವರು ಕ್ರಿ.ಶ 1667 ರಲ್ಲಿ ಭಾರತದ ಸೂರತ್ ನಲ್ಲಿ ತಮ್ಮ ಮೊದಲ ವ್ಯಾಪಾರಿ ಕೋಟೆಯನ್ನು ಆರಂಭಿಸಿದರು.
ಪ್ರೆಂಚರ ರಾಜಧಾನಿ ಪಾಂಡಿಚೇರಿಯಾಗಿತ್ತು. ಕ್ರಿ.ಶ 1742 ರಲ್ಲಿ ಭಾರತಕ್ಕೆ ಬಂದ ಡೂಪ್ಲೆ ಫ್ರೆಂಚರ ಅಧಿಕಾರ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದನು. ಇವನು ಮೊದಲ ಗವರ್ನರ್ ಆಗಿದ್ದನು.

ಅಂಗ್ಲೋ ಫ್ರೆಂಚ್ ಯುದ್ಧಗಳು ಅಥವಾ ಕರ್ನಾಟಿಕ್ ಯುದ್ಧಗಳು

ಮೊದಲನೇ ಕರ್ನಾಟಿಕ್ ಯುದ್ಧ (ಕ್ರಿ.ಶ 1746-48):- ಫ್ರೆಂಚ್ ಗವರ್ನರ್ ಡೂಪ್ಲೆ ಮತ್ತು ಬ್ರಿಟಿಷರ ಮಧ್ಯ ನಡೆಯಿತು. ಇದರಲ್ಲಿ ಬ್ರಿಟಿಷರು ಸೋತರು.’ಏ ಲಾ ಚಾಪೆಲ್’ ಒಪ್ಪಂದ ಕ್ರಿ.ಶ 1748 ರ ಮೂಲಕ ಯುದ್ಧ ಕೊನೆಗೊಂಡಿತು.
ಎರಡನೇ ಕರ್ನಾಟಿಕ್ ಯುದ್ಧ (ಕ್ರಿ.ಶ 1749-1755):- ಫ್ರೆಂಚ್ ಗವರ್ನರ್ ಡೂಪ್ಲೆ ಮತ್ತು ಬ್ರಿಟಿಷ್ ಗವರ್ನರ್ ರಾಬರ್ಟ್ ಕ್ಲೈವರ ನಡುವೆ ಈ ಯುದ್ಧ ನಡೆಯಿತು. ಇದರಲ್ಲಿ ಡೂಪ್ಲೆ ಸೋಲನ್ನನುಭವಿಸಿದನು. ಕ್ರಿ.ಶ 1755 ರಲ್ಲಿ ಪಾಂಡಿಚೇರಿ ಒಪ್ಪಂದದ ಮೂಲಕ ಈ ಯುದ್ಧ ಕೊನೆಗೊಂಡಿತು.
ಮೂರನೇ ಕರ್ನಾಟಿಕ್ ಯುದ್ಧ (ಕ್ರಿ.ಶ 1756-1763):- ಈ ಯುದ್ಧವು ಫ್ರೆಂಚ್ ಗವರ್ನರ್ ಕೌಂಟ್ ಡಿ ಲಾಲಿ ಮತ್ತು ಬ್ರಿಟಿಷರ ರಾಬರ್ಟ್ ಕ್ಲೈವರ ನಡುವೆ ನಡೆಯಿತು. ಈ ಯುದ್ಧದಲ್ಲಿ ಫ್ರೆಂಚರು ಸೋತರು. ಮತ್ತು ಈ ವೇಳೆಗೆ ಕ್ರಿ.ಶ 1763 ರಲ್ಲಿ ಯುರೋಪಿನಲ್ಲಿ ಸಪ್ತವಾರ್ಷಿಕ ಯುದ್ಧಗಳು ಕೊನೆಗೊಂಡು ಪ್ಯಾರಿಸ್ ಶಾಂತಿ ಒಪ್ಪಂದವು ಏರ್ಪಟ್ಟಿತು.
ಈ ಯುದ್ಧಗಳ ಪರಿಣಾಮದಿಂದಾಗಿ ಫ್ರೆಂಚರು ಸೋಲನ್ನನುಭವಿಸಿ ಅವರ ಪ್ರಾಬಲ್ಯವನ್ನು ಕಳೆದುಕೊಂಡರು. ಈ ರೀತಿಯಾಗಿ ಫ್ರೆಂಚರ ಅವನತಿಯಾಯಿತು.

One Comment on “ಭಾರತಕ್ಕೆ ಯುರೋಪಿಯನ್ನರ ಆಗಮನ”

Leave a Reply

Your email address will not be published. Required fields are marked *