ಭಾರತದ ಬುಡಕಟ್ಟು ಜನಾಂಗಗಳು

ಭಾರತವು ಪ್ರಪಂಷದಲ್ಲಿ ಅತಿ ಹೆಚ್ಚು ಬುಡಕಟ್ಟಿನ ಜನರನ್ನು ಹೊಂದಿರುವ ರಾಷ್ಟ್ರಗಲಲ್ಲಿ ಒಂದಾಗಿದೆ. 1950ರ ಜನಗಣತಿಯಲ್ಲಿ ಭಾರತದ ಒಟ್ಟು ಜನಸಂಖ್ಯೆಯ ಶೇ.5.36 ರಷ್ಟಿದ್ದ ಬುಡಕಟ್ಟು ಜನರ ಪ್ರಮಾಣವು 1991ರಲ್ಲಿ ಶೇ.8.08 ರಷ್ಟಕ್ಕೆ ಅಧಿಕಿಗೊಂಡಿತ್ತು. ದೇಶದ ಜನಸಂಖ್ಯಾ ಬೆಳವಣಿಗೆಯ ಪ್ರಮಾಣವು 1981-91ರ ದಶಕದಲ್ಲಿ ಶೇ.23.67 ರಷ್ಟಿದದು ಈ ಅವಧಿಯಲ್ಲಿ ಬುಡಕಟ್ಟಿನ ಜನರ ಬೆಳವಣಿಗೆಯು ಶೇ.25.67 ರಷ್ಟಿತ್ತು.

ದೇಶದಲ್ಲಿ ಅತಿ ಹೆಚ್ಚು ಬುಡಕಟ್ಟು ಜನಾಂಗ ಹೊಂದಿರುವ ರಾಜ್ಯಗಳು:

ಮಿಜೋರಾಂ(ಜನಸಂಖ್ಯೆಯ 94.75 ರಷ್ಟು), ಮೇಘಾಲಯ (93.15%) , ನಾಗಾಲ್ಯಾಂಡ್(87.7%) , ದಾದ್ರ-ನಗರ ಹವೇಲಿ(85.53%),
ಜನಸಂಖ್ಯಾ ಪ್ರಮಾಣವನ್ನು ಗಮನಿಸಿದಾಗ ಮದ್ಯ ಪ್ರದೇಶವು ಅತಿ ಹೆಚ್ಚು ಬುಡಕಟ್ಟಿನ ಜನರನ್ನು ಹೊಂದಿದೆ. ಪಂಜಾಬ್ ಅತೀ ಕಡಿಮೆ ಬುಡಕಟ್ಟಿನ ಜನಾಂಗವನ್ನು ಹೊಂದಿರುವ ರಾಜ್ಯ. ಕರ್ನಾಟಕ ರಾಜ್ಯವು ಶೇ.4.26 ರಷ್ಟು ಬುಡಕಟ್ಟಿನ ಜನರನ್ನು ಹೊಂದಿದೆ. (ದಕ್ಷಿಣ ಭಾರತದಲ್ಲಿ ಪ್ರಥಮ ಸ್ಥಾನ) ಎರಡನೇ ಸ್ಥಾನದಲ್ಲಿ ಆಂಧ್ರಪ್ರದೇಶವಿದೆ.

ಪ್ರಮುಖ ಬುಡಕಟ್ಟುಗಳು:

ಭಾರತದಲ್ಲಿ ನೂರಾರು ಬುಡಕಟ್ಟಿನ ಜನರು ಹಂಚಿಕೆಯಾಗಿರುವರು. ಇವುಗಳಲ್ಲಿ ಏಳು ಬುಡಕಟ್ಟುಗಳು ಮಾತ್ರ 9 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ.(1991). ಪ್ರಂಉಖ ಬುಡಕಟ್ಟುಗಳೆಂದರೆ ಗೊಂಡರು, ಬಿಲ್ಲರು, ಸಂತಾಲರು, ಮೀನಾಸ್, ಒರಯೋನ್, ಮುಂಡಾ ಮತ್ತುಕೊಂಡ್ ಬುಡಕಟ್ಟುಗಳು.1981ರ ಜನಗಣತಿ ಪ್ರಕಾರ ಭಾರತದ ಅತಿ ದೊಡ್ಡ ಬುಡಕಟ್ಟು ಜನಾಂಗವೆಂದರೆ –ಗೊಂಡರು(74.48 ಲಕ್ಷ)

ರಾಜ್ಯವಾರು ಪ್ರಮುಖ ಬುಡಕಟ್ಟುಗಳು :

  1. ಆಂಧ್ರಪ್ರದೇಶ : ಬೋಡೋ ಗಡಾಬ, ಗುಟೋಬ್ ಗಡಾಬಾ, ಚೆಂಚು, ಬೊಂಡ್ ಪೂರ್ಜ, ಖೋಡ್ ಪೂರ್ಜ, ಕೊಲಮ್, ಕೊಂಡರೆಡ್ಡಿ
  2. ಬಿಹಾರ : ಅಸುರ, ಬಿರ್‍ಹೋರ್, ಬಿರಿಜಾ , ಬೆಟ್ಟದ ಖೇರಿಯಾ, ಬಿರ್‍ಹೋರ್, ಬಿರಿಜಾ, ಕೋನ್‍ವಾಸ್, ಪಹಾರಿಯಾ, ಮಲ್ಪಹರಿಯಾನ್
  3. ಗುಜರಾತ್ : ಪಧಾರ್, ಕಾಥೋಡಿ , ಕೊತ್ವಾಲಿಯಾ, ಸಿಡಿಯೋ, ಕೋತ್‍ಫಾ
  4. ಕರ್ನಾಟಕ : ಜೇನು ಕುರುಬ, ಕೊರಗ
  5. ಕೇರಳ : ಚೋಳನಾಯ್ಕೆ, ಕಾಡಾರ್, ಕಟನಾಯ್ಕೆ, ಕುರುಂಬ, ಕೊರಗ
  6. ಮಧ್ಯ ಪ್ರದೇಶ : ಅಬೂಜ್ ಮರಿಹಾಸ್, ಬೈಗಾಸ್, ಸಹಾರಿಯಾ, ಬಿರೋಹೋರ್
  7. ಮಹಾರಾಷ್ಟ್ರ : ಕಾಟ್ಕೇರಿಯಾ

Leave a Reply

Your email address will not be published. Required fields are marked *